ವಿದೇಶಿ ನೇರ ಹೂಡಿಕೆಗೆ ಬೆಳೆಗಾರರ ವಿರೋಧ

 

http://www.prajavani.net/sites/default/files/styles/default/public/article_images/2015/11/15/coffee.jpg?itok=znbTUHVp

ಸಂಗ್ರಹ ಚಿತ್ರ

 

ಚಿಕ್ಕಮಗಳೂರು: ‘ಕಾಫಿ ಬೆಳೆಗಾರರನ್ನು ಕತ್ತಲಲ್ಲಿಟ್ಟು, ಅವರಿಗೆ ಮಾಹಿತಿ ನೀಡದೆ ಕಾಫಿ ಉದ್ಯಮದಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡಿರು ವುದನ್ನು ಕರ್ನಾಟಕ ಬೆಳೆಗಾರರ ಒಕ್ಕೂಟ ತೀವ್ರವಾಗಿ ವಿರೋಧಿಸಲಿದೆ’ ಎಂದು ಒಕ್ಕೂಟದ ಅಧ್ಯಕ್ಷ ಬಿ.ಎಸ್‌. ಜೈರಾಂ ಮತ್ತು ಪ್ರಧಾನ ಕಾರ್ಯದರ್ಶಿ ಯು.ಎಂ.ತೀರ್ಥಮಲ್ಲೇಶ್ ತಿಳಿಸಿದ್ದಾರೆ.

‘ಈ ವಿಚಾರದಲ್ಲಿ ಕಾಫಿ ಬೆಳೆಗಾರರಿಗೆ ಮನವರಿಕೆ ಮಾಡುವಲ್ಲಿ ಕಾಫಿ ಮಂಡಳಿ ಹಾಗೂ ಕೇಂದ್ರ ವಾಣಿಜ್ಯ ಸಚಿವಾಲಯ ವಿಫಲವಾಗಿದೆ. ಕಾಫಿ ಮಂಡಳಿಯು ನೇರ ವಿದೇಶಿ ಬಂಡವಾಳದ ಕುರಿತು ಸಭೆ ನಡೆಸಿದೆ. ಆದರೆ ಅದರ ಸಾಧಕ ಭಾದಕಗಳನ್ನು ಒಕ್ಕೂಟಕ್ಕೆ ಹಾಗೂ ಬೆಳೆಗಾರರಿಗೆ ತಿಳಿಸಿಲ್ಲ. ವಿದೇಶಿ ಬಂಡವಾಳ ಹೂಡಿಕೆಗೆ ವಿರೋಧವಿದ್ದ ರೂ, ಕೇಂದ್ರ ವಾಣಿಜ್ಯ ಸಚಿವಾಲ ಯಕ್ಕೆ ಪೂರಕ ವರದಿ ನೀಡಿದೆ. ಇದನ್ನು ಬೆಳೆ ಗಾರರು ತೀವ್ರವಾಗಿ ವಿರೋಧಿ ಸುತ್ತೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕಾಫಿ ಮಂಡಳಿಯು ಕಾಫಿ ತೋಟಗ ಳಲ್ಲಿ ಅಧಿಕ ಇಳುವರಿ ಪಡೆಯುವ ದೃಷ್ಟಿಯಿಂದ ಯಾಂತ್ರೀ ಕರಣ ಪರಿಚ ಯಿಸುವುದು, ಬಿಳಿಕಾಂಡ ಕೊರಕಕ್ಕೆ ಔಷಧಿ ಕಂಡು ಹಿಡಿಯುವುದಕ್ಕೆ ಹೆಚ್ಚು ಒತ್ತು ನೀಡದೇ, ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಶೇ. 50 ಕಾಫಿ ನೆಲಕ್ಕೆ ಉದುರಿದೆ. ಇದನ್ನು ಕೇಂದ್ರ ಸಚಿವಾಲಯದ ಗಮನಕ್ಕೆ ತಾರದೇ,  ಸರ್ಕಾರದೊಂದಿಗೆ ನೇರ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಲು ಕೈಜೋಡಿಸಿರುವುದು ವಿಪರ್ಯಾಸ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ವಿದೇಶಿ ಬಂಡವಾಳ ನೇರ ಹೂಡಿಕೆಗೆ ಅವಕಾಶ ನೀಡಿದರೆ ಬಹುರಾಷ್ಟ್ರೀಯ ಕಂಪನಿಗಳು ಸಣ್ಣ ಸಣ್ಣ ಬೆಳೆಗಾರರನ್ನು ಒಟ್ಟುಗೂಡಿಸಿ, ಅವರ ತೋಟಗಳನ್ನು ಖರೀದಿಸಿ ಅವರನ್ನು ನಿರಾಶ್ರಿತರನ್ನಾಗಿ ಮಾಡುತ್ತವೆ. ಕಾಫಿ ಮಂಡಳಿ ಹಾಗೂ ಕೇಂದ್ರ ವಾಣಿಜ್ಯ ಸಚಿವಾಲಯ ಹಾಗೂ ಕೇಂದ್ರ ಹಣಕಾಸು ಸಚಿವಾಲಯ  ಬಹುರಾಷ್ಟ್ರೀಯ ಕಂಪೆ ನಿಗಳಿಗೆ ಸಹಕಾರ ನೀಡುತ್ತಿದ್ದು, ಸಣ್ಣ ಬೆಳೆಗಾರರನ್ನು ಗಣನೆಗೆ ತೆಗೆದು ಕೊಳ್ಳದಿರುವುದು ಖಂಡನೀಯ. ದೇಶದ ಕಾಫಿಯು ನೆರಳಿನಾಶ್ರಯದಲ್ಲಿ ಬೆಳೆಯುವುದರಿಂದ ಸಾಕಷ್ಟು ಬೇಡಿಕೆ ಇದೆ.

ಬಹುರಾಷ್ಟ್ರೀಯ ಕಂಪನಿಗಳು ಕಾಫಿ ಉತ್ಪಾದನೆ ಹೆಚ್ಚು ಮಾಡುವ ದೃಷ್ಟಿ ಯಿಂದ, ತಮ್ಮ ದೇಶದ ಯಂತ್ರೋ ಪಕರಣಗಳು, ಔಷಧಿಗಳನ್ನು ತಂದು ಇಲ್ಲಿ ಪರಿಚಯಿಸಿ, ಬಳಸುವುದ ರಿಂದ ಇಲ್ಲಿನ ಪರಿಸರ ಹಾಳಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ಕಾಫಿ ಮಂಡಳಿ ಹಾಗೂ ಕೇಂದ್ರ ವಾಣಿಜ್ಯ ಸಚಿವಾಲಯ ಸಣ್ಣ  ಬೆಳೆಗಾರರ ಪರ ಕೆಲಸ ಮಾಡಬೇಕು. ಕಾಫಿಯಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆಗೆ ಆಸ್ಪದ ನೀಡಬಾರದು. ಕಾಫಿ ಮಂಡಳಿ ಸದಸ್ಯರು ಈ ಬಗ್ಗೆ ದ್ವನಿ ಎತ್ತದೆ, ಮೌನ ವಹಿಸಿರುವುದು  ಬೆಳೆಗಾರರಿಗೆ ಅನು ಮಾನ ಮೂಡುವಂತೆ ಮಾಡಿದೆ’ ಎಂದು ತಿಳಿಸಿದ್ದಾರೆ.

 

Login Form